ರಾಧೆಯೆ ಕೇಳು .............
ರಾಧೆ ನಿನ್ನ ನೋಡದೆ
ಕಳೆದೆನಿನಿತು ದಿನಗಳ
ನೆನೆದು ನೆನೆದು ನಿನ್ನನೆ
ಕಂಬನಿ ತುಂಬಿದ ಕಂಗಳ
ನೆನ್ನೆ ಮೊನ್ನೆಯಷ್ಟೇ ಶುರುವಾಯಿತು ನಮ್ಮ ಪ್ರೀತಿ ಬಾಳು
ಕಂಡಿತಿಷ್ಟೇ ದಿನಗಳಲ್ಲಿ ಎನಿತು ಏಳು ಬೀಳು
ಮೋಹಕ ಮೋಹದ ಮೋಹನ ರಾಗಕೆ
ಕಾಣದ ಕೇಳದ ಅರಿಯದ ತೀರಕೆ
ಮೋಹನನ ಆ ಪ್ರೀತಿ ಪಾಶಕೆ
ಬಲಿಯಾದಳೆನ್ನ ಮೇನಕೆ
ಹೋದಳು ಬರಲಾರದಷ್ಟು ದೂರಕೆ
ದೀಪವೆ ಕಾಣದ ಜೀವನ ನನ್ನದು
ತುಂಬಿದ ಕಂಗಳ ಮನೆಯೇ ಬರಿದು
ಬಂದೂ ಬಾರದೆ ಕಾಡುವ ನಿದ್ದೆ
ನೆನೆದು ನೆನೆದು ಕಂಗಳು ಒದ್ದೆ
ಇದ್ದೂ ಇರದ ಅಳುವಿನ ಸದ್ದೇ
ನೆನ್ನೆಯ ತನಕ ನೀನೆ ನಾನು
ಇಂದಿನ ಮರುಕ ನಾನೋ ನೀನೋ
ನಾಳಿನ ತವಕ ಹೇಗೋ ಏನೋ
ನಿನ್ನಯ ಮೋಹಕ ಮುಖವನು ನೆನೆಯುತ
ನಿನ್ನಯ ಮಾತಿನ ಸವಿಯನು ಸವಿಯುತ
ನಿನ್ನದೇ ನೆನಪಲಿ ಬಾಳನು ಕಳೆಯುತ
ನೀನಿಲ್ಲದ ಈ ಬಾಳನು ಬಾಳುತ
ಬದುಕಿನ ಪಯಣದಿ ಏಳುತ ಬೀಳುತ
ನೀನಿಲ್ಲದ ಈ ಬಾಳನು ದೂರುತ
ಇನ್ನೂ ಬದುಕಿರುವೆ
ನಿನದೆ ನೆನಪು ಅದರದೇ ಹುರುಪು
ಎನಗೆ ನಿನದೆ ಧ್ಯಾನ
ನೀನೆ ಬೆಳಕು ನೀನೆ ಬದುಕು
ನೀನಿರದೀ ಬಾಳೇ ಮೌನ
ಬದುಕಿದು ಸುಂದರ ನಿನ್ನಯ ಸಂಗಡ
ನೀನೆ ನನ್ನ ಜೀವ
ಬದುಕಿನ ಪಾಠಕೆ ನೀನೆ ನನ್ನ ಗುರುವು
ನೀನೆ ನನ್ನ ದೈವ
ನೀನೆ ಭಾವ ನೀನೆ ಅರ್ಥ
ನನಗೆ ನೀನೆ ಭಾವಾರ್ಥ
ಸರಸವು ನಿನದೆ ವಿರಸವು ನಿನದೆ
ನನಗೆ ಅದೇ ಸಾಮರಸ್ಯ